Firefox ಅನ್ನು ಇತ್ತೀಚಿನ ಆವೃತ್ತಿಗೆ ಪರಿಷ್ಕರಿಸಿ

Firefox Firefox Last updated: 78% of users voted this helpful

ಸಾಮಾನ್ಯವಾಗಿ, Firefox ಸ್ವಯಂಚಾಲಿತವಾಗಿ ಪರಿಷ್ಕರಣೆಗೊಳ್ಳಲು ಹೊಂದಿಸಲಾಗಿದ್ದರೂ ನೀವದನ್ನು ಬೇಕೆಂದಾಗ ಪರಿಷ್ಕರಿಸಬಹುದು. ಹೇಗೆ ಇಲ್ಲಿ ತಿಳಿಯಿರಿ:

ಟಿಪ್ಪಣಿ: ನೀವು ನಿಮ್ಮ ಲಿನಕ್ಸ್ ಡಿಸ್ಟ್ರಿಬ್ಯೂಷನ್ ಜೊತೆ ಪ್ಯಾಕೇಜ್ ಆಗಿ ಬಂದಿರುವ Firefox ಅನ್ನು ಬಳಸುತ್ತಿದ್ದಲ್ಲಿ, ನೀವು ಪರಿಷ್ಕರಿಸಿದ ಆವೃತ್ತಿ ಪ್ಯಾಕೇಜ್ ಸಂಗ್ರಹಕ್ಕೆ ಬಿಡುಗಡೆಗೊಳ್ಳುವವರೆಗೆ ಕಾಯಬೇಕಾಗುವುದು. ಈ ಲೇಖನವು ನೀವು ಕೈಯಾರೆ Firefox ಅನುಸ್ಥಾಪಿಸಿದ್ದಲ್ಲಿ ಮಾತ್ರ ಅನ್ವಯವಾಗುತ್ತದೆ (ನಿಮ್ಮ ಡಿಸ್ಟ್ರಿಬ್ಯೂಷನ್‌ನ ಪ್ಯಾಕೇಜ್ ಮ್ಯಾನೇಜರ್ ಬಳಸದೆ).
  1. New Fx Menu ಮೆನು ಗುಂಡಿ ಕ್ಲಿಕ್ಕಿಸಿ, Help-29 ಸಹಾಯ ಕ್ಲಿಕ್ಕಿಸಿ ಮತ್ತು Firefox ಬಗ್ಗೆ ಆಯ್ಕೆ ಮಾಡಿ.ಮೆನು ಪಟ್ಟಿಯಲ್ಲಿ Firefox ಮೆನು ಕ್ಲಿಕ್ ಮಾಡಿ ಮತ್ತು Firefox ಬಗ್ಗೆ ಆಯ್ಕೆ ಮಾಡಿ.
  2. Firefox ಬಗ್ಗೆ ಕಿಟಕಿ ತೆರೆಯುತ್ತದೆ ಮತ್ತು Firefox ಪರಿಷ್ಕರಣೆಗೆ ಹುಡುಕುವುದನ್ನು ಮತ್ತು ಅವುಗಳನ್ನು ಸ್ವಯಂಚಾಲಿತವಾಗಿ ಡೌನ್ಲೋಡ್ ಮಾಡುವುದನ್ನು ಪ್ರಾರಂಭಿಸುತ್ತದೆ.
    Update Win1 Fx14
  3. ಪರಿಷ್ಕರಣೆಗಳು ಅನುಸ್ಥಾಪನೆಗೆ ಸಿದ್ಧವಾದಾಗ, ಪರಿಷ್ಕರಣೆಗೆ ಮರು ಪ್ರಾರಂಭಿಸಿಪರಿಷ್ಕರಣೆಗೆ Firefox ಮರು ಪ್ರಾರಂಭಿಸಿ ಕ್ಲಿಕ್ ಮಾಡಿ.
    Update Win2 Fx14Update Win2 Fx34
ಮಹತ್ವದ್ದು: ಪರಿಷ್ಕರಣೆ ಪ್ರಾರಂಭವಾಗದಿದ್ದಲ್ಲಿ, ಸಂಪೂರ್ಣವಾಗದಿದ್ದಲ್ಲಿ ಅಥವಾ ಬೇರಾವುದೇ ತೊಂದರೆ ಇದ್ದಲ್ಲಿ, ದಯವಿಟ್ಟು www.mozilla.orgಗೆ ಭೇಟಿಕೊಟ್ಟು ನಿಮ್ಮ ಆಪರೇಟಿಂಗ್ ಸಿಸ್ಟಂಗೆ ಮತ್ತು ಭಾಷೆಗೆ ಇತ್ತೀಚಿನ Firefox ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳಿ (ಹೆಚ್ಚಿನ ಸೂಚನೆಗಳಿಗೆ ನೋಡಿ How to install Firefox on WindowsInstall Firefox on LinuxHow to download and install Firefox on Mac)

ಪರಿಷ್ಕರಣೆ ಸಿದ್ಧತೆಗಳನ್ನು ಬದಲಾಯಿಸಲು, ನೋಡಿ Advanced panel - Accessibility, browsing, network, updates, and other advanced settings in Firefox.

Was this article helpful?

Please wait...

These fine people helped write this article:

Illustration of hands

Volunteer

Grow and share your expertise with others. Answer questions and improve our knowledge base.

Learn More